14/08/2026
ಬೀದರ್‌ಗೆ ದರೋಡೆ ಆರೋಪಿಗಳ ಕರೆತಂದ
ಪೊಲೀಸರು
ಬೀದರ್: ಬಿಹಾರದಿಂದ ಇಬ್ಬರು ದರೋಡೆ ಆರೋಪಿಗಳನ್ನು ಪೊಲೀಸರು ಬೀದರ್‌ಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಅಮನ್‌ಕುಮಾರ್ ಹಾಗೂ ಅಲೋಕ್‌ಕುಮಾರ್ ಎಂಬ ಆರೋಪಿಗಳನ್ನು ಕ್ರಿಸ್ಟಾ ಕಾರಿನಲ್ಲಿ ಬೀದರ್‌ಗೆ ಕರೆತಂದ ಪೊಲೀಸರು, ಡಿವೈಎಸ್‌ಪಿ ಕಚೇರಿಯಲ್ಲಿ ವಿಚಾರಣೆ ನಡೆಸಿದ್ದಾರೆ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಂದ ಮಾಹಿತಿ ಕಲೆಹಾಕಲು ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಪೂರ್ಣಗೊಂಡ ಬಳಿಕ ಇಬ್ಬರು ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.