
13/06/2025
ನಮ್ಮ "ಶಂಕರ್ ನಾಗ್"ರವರ ನಕ್ಷತ್ರ ನಾಮ ಅವಿನಾಶ್ ಅಂತ.
ಅಂದರೆ ಎಂದು ನಾಶವಾಗದವನು ಎಂದರ್ಥ. ಹೌದಲ್ಲವೇ.?
ಶಂಕರ್ ಭೌತಿಕವಾಗಿ ಸತ್ತು ಇಪ್ಪತ್ತ ಒಂಭತ್ತು ವರ್ಷಗಳೇ ಸಂದರೂ ಅವರ ಬಗ್ಗೆ, ಅವರ ಸಾಧನೆಗಳ ಬಗ್ಗೆ ನಾವು ಮಾತಾಡುವುದಿಲ್ಲವೇ.?
ಬರೆಯುವುದಿಲ್ಲವೇ.?
ಅವರು ಬಿಟ್ಟು ಹೋದ ಸಿನಿಮಾಗಳನ್ನು ನೋಡುವುದಿಲ್ಲವೇ.?
ಹಾಗಿದ್ದರೆ ಶಂಕರ್ ಸತ್ತಿರುವುದು ಸುಳ್ಳಲ್ಲವೇ.?
'ಅವಿನಾಶ್' ಎನ್ನುವ ಹೆಸರನ್ನು ಅವರ ಮನೆಯಲ್ಲಿ ಕೆಲವರು ಇಷ್ಟ ಪಡಲಿಲ್ಲ. ಉಡುಪಿಯಲ್ಲಿ ಹುಟ್ಟಿದ್ದರಿಂದ 'ಶ್ರೀ ಕೃಷ್ಣ' ಎಂಬ ಹೆಸರನ್ನಿಡೂವ ಬಗ್ಗೆಯೂ ಚರ್ಚೆ ನಡೆದಿತ್ತು. ಆದರೆ ಶಂಕರ್ ತಂದೆ ಸದಾನಂದ ನಾಗರಕಟ್ಟೆಯವರು ತುಂಬಾ ಪ್ರೀತಿಯಂದ ಇಟ್ಟ ಹೆಸರು "ಭವಾನಿ ಶಂಕರ". ಈ ಹೆಸರಿಗೆ ಅಡ್ಡಗಾಲು ಹಾಕಿದ್ದು ಸ್ವತಃ ಶಂಕರ್ ತಾಯಿ ಆನಂದಿ. 'ಅಷ್ಟುದ್ದ ಹೆಸರನ್ನು ಕರೆಯುವುದು ಹೇಗೆ.? ನಾನಂತೂ 'ಅವಿನಾಶ'ನೆಂದೇ ಕರೆಯುತ್ತೇನೆ. ನೀವು ಹೇಗೆ ಬೇಕಾದರೂ ಕರೆಯಿರಿ. ಪರವಾಗಿಲ್ಲ' ಎಂದು ಹೇಳಿಬಿಟ್ಟರು.
ಮನೆಯ ಯಜಮಾನಿಯೆ ಹೀಗೆ ಹೇಳಿದ ಮೇಲೆ ಉಳಿದವರು ತಲೆಯಾಡಿಸದಿದ್ದರೆ ಹೇಗೆ.? ಹೀಗಾಗಿ 'ಭವಾನಿ ಶಂಕರ' ಎನ್ನುವ ಹೆಸರಿನಲ್ಲಿ 'ಭವಾನಿ' ಬಿಟ್ಟು ಕೊಟ್ಟು ಬರಿ 'ಶಂಕರ' ಎನ್ನುವಹೆಸರು ಚಾಲ್ತಿಗೆ ಬಂತು. ನಂತರದ ವೃತ್ತಿ ಬದುಕಿನ ದಿನಗಳಲ್ಲಿ, ಚಿತ್ರರಂಗದಲ್ಲಿ ಸಾಕಷ್ಟು 'ಶಂಕರ'ಗಳಿದ್ದುದರಿಂದ ಇವರು ತಮಗೆ ತಾವೇ 'ಶಂಕರ ನಾಗರಕಟ್ಟೆಯಾದರು. ಇದೂ ಕೂಡಾ ಅಷ್ಟುದ್ದದ ಹೆಸರಾಯಿತಲ್ಲಾ ಎನ್ನುವ ಕಾರಣಕ್ಕೆ 'ನಾಗರಕಟ್ಟೆ'ಯನ್ನು 'ನಾಗ್' ಮಾಡಿ "ಶಂಕರ್ ನಾಗ್" ಆದದ್ದು ಈಗ ಇತಿಹಾಸ......